ಕೆರೂರು ವಾಸುದೇವಾಚಾರ್ಯರು ೧೮೬೬ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸಾಚಾರ್ಯ. ತಾಯಿ ಪದ್ಮಾವತಿ. ಕನ್ನಡದ ನವೋದಯದ ಮೊದಮೊದಲ ಸಾಹಿತಿಗಳಲ್ಲಿ ಇವರೊಬ್ಬರು. ಕಾದಂಬರಿ ಅಲ್ಲದೆ ನಾಟಕಗಳನ್ನೂ ಸಹ ಅನುವಾದಿಸಿ, ಬರೆದು, ರಂಗದ ಮೇಲೆ ಆಡಿಸಿದ್ದಾರೆ. == ಕೃತಿಗಳು == === ಕಾದಂಬರಿಗಳು === ಇಂದಿರಾ - (೧೯೦೮) - ಈ ಕಾದಂಬರಿಯು ಬಾಲ್ಯ ವಿವಾಹ, ವಿಧವಾ ವಿವಾಹದ ಕಥಾವಸ್ತುವನ್ನು ಹೊಂದಿದೆ. ಯದುಮಹಾರಾಜ ಭ್ರಾತೃಘಾತಕ ಔರಂಗಜೇಬ ವಾಲ್ಮೀಕಿ ವಿಜಯ ಯವನ ಸೈರಂಧ್ರಿ === ನಾಟಕಗಳು === ನಳದಮಯಂತಿ ರುಕ್ಮಿಣಿ ಹರಣ ರಮೇಶ-ಲಲಿತ ಸುರತನಗರದ ಶ್ರೇಷ್ಠಿ (ಮೂಲ : ಷೇಕ್ಸ್ ಪಿಯರನ “ಮರ್ಚಂಟ್ ಆಫ್ ವೆನಿಸ್') ವಸಂತಯಾಮಿನಿ ಸ್ವಪ್ನಚಮತ್ಕಾರ (ಮೂಲ : ಷೇಕ್ಸ್ ಪಿಯರನ “ ಮಿಡ್ ಸಮರ್ ನೈಟ್ಸ್ ಡ್ರೀಮ್") ಪತಿ ವಶೀಕರಣ (ಆಲಿವರ್ ಗೋಲ್ಡ್ಸ್ ಸ್ಮಿತ್‍ನ "ಷಿ ಸ್ಟೂಪ್ಸ್ ಟು ಕಾಂಕರ್" ನಾಟಕವೊಂದರ ಅನುವಾದ) == ಕಥಾ ಸಂಕಲನ == ತೊಳೆದ ಮುತ್ತು ಪ್ರೇಮ ವಿಜಯ ಬೆಳಗಿದ ದೀಪಗಳು ಬೆಳ್ಳೀ ಚಿಕ್ಕೆ == ಪತ್ರಿಕೋದ್ಯಮ == ಕೆರೂರು ವಾಸುದೇವಾಚಾರ್ಯರು “ಶುಭೋದಯ” ಹಾಗು “ಸಚಿತ್ರ ಭಾರತ” ಎನ್ನುವ ಎರಡು ಪತ್ರಿಕೆಗಳನ್ನು ಪ್ರಾರಂಭಿಸಿದರು. == ಇತರ ವಿಷಯಗಳು == ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘವು ೧೯೬೪ ರಲ್ಲಿ ವಾಸುದೇವ ಪ್ರಶಸ್ತಿ ಎಂಬ ಸ್ಮಾರಕ ಸಂಪುಟವನ್ನು ಪ್ರಕಟಿಸಿತು. == ನಿಧನ == ಕೆರೂರು ವಾಸುದೇವಾಚಾರ್ಯರು ೧೯೨೧ರಲ್ಲಿ ನಿಧನರಾದರು. == ಹೊರಗಿನ ಕೊಂಡಿಗಳು == ಕೆರೂರು ವಾಸುದೇವಾಚಾರ್ಯರ ಬರಹಗಳು ಇಲ್ಲಿ ಪ್ರಕಟಗೊಂಡಿವೆ